ಡಾ.ಹಂಸಲೇಖಾ ಹುಟ್ಟುಹಬ್ಬದಲ್ಲಿ ಕನ್ನಡದ ಕಂಪು
Posted date: 24 Fri, Jun 2016 – 01:49:50 PM

ಚಂದನವನದ ನಾದಬ್ರಹ್ಮ ಡಾ.ಹಂಸಲೇಖಾರವರ ೬೬ನೇ ಹುಟ್ಟುಹಬ್ಬವನ್ನು ಹಂಸಲೇಖಾ ನೆಪ ಕನ್ನಡದ ಜಪ ಪರಿಕಲ್ಪನೆಯೊಂದಿಗೆ ಅವರ ಶಿಷ್ಯವೃಂದದವರು ಅದ್ದೂರಿಯಾಗಿ ಆಚರಿಸಿದರು. ಅದರನ್ವಯ ಗುರುವಾರ ಕಂಠೀರವ ಸ್ಟುಡಿಯೋದಿಂದ ರಾಜಾಜಿನಗರ ಕಲಾಕ್ಷೇತ್ರದವರೆಗೆ ಹಿರಿಯ ಸಾಹಿತಿಗಳು,ಅಕಾಡಮಿ ಮತ್ತು ವಾಣಿಜ್ಯ ಮಂಡಳಿ ಅಧ್ಯಕ್ಷರು, ಶಾಸಕರು ಸೇರಿದಂತೆ ಮೆರವಣಿಗೆಯಲ್ಲಿ ಅವರನ್ನು ಗೌರವದಿಂದ ಕರೆತರಲಾಯಿತು. ದಾರಿಯುದ್ದಕ್ಕೂ ತಳಿರುತೋರಣ, ಕನ್ನಡ ಚಿತ್ರಗೀತೆ,ನಾಡಗೀತೆಗಳನ್ನು ಗಾಯಕರು ತಂಡದೊಂದಿಗೆ ಹಾಡಿದ್ದು ವಿಶೇಷವಾಗಿತ್ತು.  ಸಾಯಂಕಾಲ ನಡೆದ ಕಾರ್ಯಕ್ರಮದಲ್ಲಿ ಹಂಸಲೇಖರವರ ಹಿಟ್ ಗೀತೆಗಳ ಸಂಗೀತ ಸಂಜೆಯನ್ನು ಶಿಷ್ಯಂದಿರು  ಗುರುಗಳ ಸಮ್ಮುಖದಲ್ಲಿ ಹಾಡಿ ಗುರುವಂದನೆ ಸಲ್ಲಿಸಿದರು. ನಂತರ ಇವರ ಗರಡಿಯಲ್ಲಿ ಪಳಗಿದ ಗಾಯಕ,ಗಾಯಕಿಯರು, ತಂತ್ರಜ್ಘರು, ಸಂಗೀತ ನಿರ್ದೇಶಕರಿಗೆ ಹಂಸಲೇಖಾರವರು ನೆನಪಿನಕಾಣಿಕೆ ನೀಡಿ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಇವರ ಸಂಯೋಜನೆಯ ಆಯ್ದ ೧೬೦ ಚಿತ್ರಗಳ ನಾದಬ್ರಹ್ಮ-ರಾಗಬ್ರಹ್ಮ ಆಡಿಯೋ ಸಿಡಿಯನ್ನು ಅನಾವರಣಗೊಳಿಸಲಾಯಿತು. ಕನ್ನಡದ ದೇಸಿ ಶಾಲೆಯನ್ನು ರಾಷ್ಟ್ರ ಮಟ್ಟದವರೆಗೂ ತೆಗೆದುಕೊಂಡ ಕೀರ್ತಿ ಹಂಸಲೇಖಾರವರಿಗೆ ಸಲ್ಲುತ್ತದೆ ಎಂದು ಮಾಜಿ ಶಾಸಕ ನರೇಂದ್ರಬಾಬು ಹೇಳಿದರೆ, ೬೬ ನಾಟ್‌ಔಟ್ ಎಂದರು ಬಿ.ಸಿ.ಪಾಟೀಲ್. ದೇಸಿ ಶಾಲೆಗೆ ಪಾಲಿಕೆಯಿಂದ ೧೦ ಲಕ್ಷ್ಷಗಳ ಅನುದಾನವನ್ನು ನೀಡಲಾಗಿದೆ ಅಂತ ಮಾಹಿತಿಯನ್ನು ಹೊರಹಾಕಿದರು ಕಾರ್ಪೋರೇಟರ್ ಶಿವರಾಜು.
         ಅವಸಾನದಲ್ಲಿ ಶಿಷ್ಯರ ಕಾರ್ಯಸಾಧನೆಯನ್ನು ನೋಡಿ ನಾದಬ್ರಹ್ಮರು ಈ ರೀತಿ ಹೇಳಿದರು. ಕನಸುಗಾರನ ರಾಜ ನಮ್‌ಯಜಮಾನ್ರು.. ಅದು ರವಿಚಂದ್ರನ್. ನಾನು ಕನಸುಗಳ ತಿಂಡಿಪೋತ. ಅವರು ಕನಸುಗಳನ್ನು ಬೇರೆಯವರಿಗೆ ಹಂಚಿ ಬೆಳೆಸುತ್ತಿದ್ದರು. ಶಿಷ್ಯ ಇಂದ್ರ ಸಕಲ ಫೌಂಡೇಶನ್ ಮೂಲಕ  ಪ್ರತಿ ತಿಂಗಳು ರಾಜ್ಯಾದ್ಯಂತ ಹಂಸೋತ್ಸವ ಕಾರ್ಯಕ್ರಮವನ್ನು ನಡೆಸುತ್ತೇನೆಂದು ಹೇಳಿದ್ದಾನೆ. ಇದಕ್ಕೆ ವಿಟಮಿನ್ ಎಂ ಅವಶ್ಯಕವಾಗಿದೆ. ಅದು ಇಲ್ಲದಿದ್ದರೆ ಸಕಲ ಹೋಗಿ ಲಕಸ ಆಗುತ್ತದೆ. ಅವನು ಲಕ್ಷ ನೋಡದೆ ಲಕ್ಷ್ಯದಿಂದ ಕೆಲಸ ಮಾಡುತ್ತಿರುವುದಕ್ಕೆ ಮುಂದೆ ನಿರ್ದೇಶಕನಾಗುವ ಯೋಗ್ಯತೆ ಇದೆ. ನನ್ನ ಕೋಪ,ತಾಪ ಆಜ್ಘೆ ಮೀರಿ ಕನ್ನಡದ ಕೆಲಸವನ್ನು ಮಾಡಿದ್ದಾನೆ. ಕರ್ನಾಟಕದ ನಾಲ್ಕು ದಿಕ್ಕುಗಳು  ಬೇರೆ ಜಗತ್ತಿಗೆ  ಕರೆದುಕೊಂಡು ಹೋಗಿದೆ. ಸರ್.ಎಂ.ವಿಶ್ವೇಶ್ವರಯ್ಯ, ಕುವೆಂಪು, ಡಾ.ರಾಜ್‌ಕುಮಾರ್,  ಕೊನೆಯದಾಗಿ ಕರ್ನಾಟಕ ಸಂಗೀತ. ಸಸಿ ಬೆಳೆದು ಮರವಾಗಬೇಕಾದರೆ ಅದಕ್ಕೆ ನೀರು,ಗೊಬ್ಬರ ಹಾಕಿದರೆ ಹೆಮ್ಮರವಾಗುತ್ತದೆ. ಅದೇ ರೀತಿ ಕನ್ನಡವನ್ನು ಶಿಸ್ತುಬದ್ದವಾಗಿ ನೋಡಿಕೊಂಡರೆ ಅದು ಕನ್ನಡ ಸಂಘವಾಗುತ್ತದೆ. ಇಲ್ಲದಿದ್ದಲ್ಲಿ ಪ್ರಾರಂಭದಲ್ಲಿ ಅಸಡ್ಡೆ ಮಾಡಿದರೆ ಚಿವುಟಿದಂತೆ ಆಗುತ್ತದೆ. ಪಂಪ, ರನ್ನ, ವಚನಕಾರರು, ಚಿ.ಉದಯಶಂಕರ್, ಹಂಸಲೇಖಾ, ಯೋಗರಾಜಭಟ್ಟರು ತಮ್ಮದೆ ಸ್ವಂತಿಕೆಯಲ್ಲಿ ಸಾಹಿತ್ಯವನ್ನು ರಚಿಸಿದ್ದಾರೆ. ಮುಂದಿನ ಪೀಳಿಗೆಯ ಮಕ್ಕಳಿಗೆ ಕನ್ನಡ ಜನಪದ ಹಾಡು, ಚಿಕ್ಕ ನಾಟಕವನ್ನು ಹೇಳಿಕೊಟ್ಟರೆ ಅದು ಮುಂದೆ ಬೇರೆಯವರಿಗೆ ಉಪಯೋಗವಾಗುತ್ತದೆ. ಪ್ರಸಕ್ತ ಕನ್ನಡಬಲ್ಲ ಟೆಕ್ಕಿಗಳ ಸಂಖ್ಯೆ ೩೦೦೦ ಇರುವುದು ಕಂಡು ಬಂದಿದೆ. ಅವರು ಭಾಷೆಯನ್ನು ಅಂತರರಾಷ್ಟೀಯ ಮಟ್ಟಕ್ಕೆ ತಲುಪಿಸುತ್ತಿದ್ದಾರೆ. ಕನ್ನಡವನ್ನು ಶೃತಿಬದ್ದ,ಕ್ರಮಬದ್ದವಾಗಿ ಮಾತನಾಡುವುದು ೭೦ರ ಹರೆಯ ಎಸ್.ಬಿ.ಬಾಲಸುಬ್ರಮಣ್ಯಂ. ಅಲ್ಲದೆ ಅಪಸ್ವರದಿಂದ ಹಾಡಿದ್ದು ನೋಡಿಲ್ಲ. ಅವರು ಒಂಥರ ಶಾಲೆ ಇದ್ದಂಗೆ ಎಂದು ದೀರ್ಘ ಕಾಲದ ಮಾತಿಗೆ ವಿರಾಮ ಹಾಕಿದರು. ಹಾಡುವ ಸಮಯದಲ್ಲಿ ಹಂಸೇಖಾರವರ ಸಾಧನೆಯ ಭಾವಚಿತ್ರಗಳು ಪುಟ್ಟ ಎಲ್‌ಇಡಿ ಪರದೆ ಮೇಲೆ ಬಿತ್ತರಗೊಳ್ಳುತ್ತಿದ್ದವು.

GALLERY
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed